ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಶಾಲೆಯ ಪ್ರಕಾರ್ಯಗಳು:

 

ಪಂಚಾಯತ್ ರಾಜ್ ನ ಭಾಗವಹಿಸುವಿಕೆ, ಬಲಪಡಿಸುವಿಕೆ, ವಿಕೇಂದ್ರೀಕರಣ, ಅಭಿವೃದ್ಧಿ ಚಟುವಟಿಕೆ ಇತ್ಯಾದಿಗಳನ್ನು ಅಧಿಕಗೊಳಿಸುವ ಕ್ಷೇತ್ರದಲ್ಲಿನ ಅಧ್ಯಯನ ಮತ್ತು ಸಂಶೋಧನೆಯನ್ನು ಪ್ರವರ್ತಿಸುವುದು.

 

ಪಂಚಾಯತ್ ರಾಜ್ ಸಂಸ್ಥೆಗಳ ಜನ ಪ್ರತಿನಿಧಿಗಳಿಗೆ, ಸರ್ಕಾರಿ ಅಧಿಕಾರಿಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಮುಂತಾದವರಿಗೆ ಅಭಿವಿನ್ಯಾಸ / ಪುನಶ್ಚೇತನ ಕಾರ್ಯಕ್ರಮಗಳನ್ನು ಸಂಘಟಿಸಲು ಸಮುಚಿತ ಪ್ರಾಧಿಕಾರಗಳಿಗೆ ಪ್ರಸ್ತಾವನೆಗಳನ್ನು ಸಲ್ಲಿಸುವುದು.

 

ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂಬಂಧಿಸಿದ ಸಂವಿಧಾನಿಕ ಉಪಬಂಧಗಳಿಗೆ ಮತ್ತು ಸಂಬಂಧಿತ ಕಾನೂನುಗಳ ಅನುಷ್ಠಾದಲ್ಲಿನ ಅಡ್ಡಿ – ಆತಂಕಗಳ ಬಗೆಗೆ ಅಧ್ಯಯನ ಮಾಡುವುದು ಮತ್ತು ಸುಧಾರಣೆಗಳನ್ನು ಸೂಚಿಸುವುದು.

 

ಸ್ತ್ರೀಯರ, ದುರ್ಬಲ ವರ್ಗದವರ ಮತ್ತು ಭಾಗವಹಿಸುವಿಕೆಯನ್ನು ಖಚಿತಪಡಿಸಲು ಕಾರ್ಯತಂತ್ರಗಳನ್ನು ರೂಪಿಸುವುದು.

 

ಪಂಚಾಯತ್ ರಾಜ್ ಸಂಸ್ಥೆಗಳ ಉತ್ತಮ ಆಚರಣೆಗಳನ್ನು ರೂಪಿಸುವುದು ಮತ್ತು ಪ್ರಕಟಣೆ ಮತ್ತು ಸಂಪರ್ಕ ಸಂವಹನ ಮಾಧ್ಯಮಗಳ ಮುಖಾಂತರ ಅವನ್ನು ಪ್ರಚುರಪಡಿಸಲು ಏರ್ಪಾಡು ಮಾಡುವುದು.

 

ಸಂಪರ್ಕ-ಸಂವಹನಾಭಿವೃದ್ಧಿ ಅಧ್ಯಯನ ಮಾಡುವುದು.